ಕೊಡಕ್ಯನ ಅಥವಾ ಮಜ್ಜಿಗೆ ಹುಳಿ

ಕೊಡಕ್ಯನ ದಕ್ಷಿಣ ಕನ್ನಡದ ಪದಾರ್ಥ ಅಂದರೆ ಮೇಲೋಗರ. ಕೆಲವೆಡೆ ಇದನ್ನೇ ಮಜ್ಜಿಗೆಹುಳಿ ಎಂದೂ ಕರೆಯುತ್ತಾರೆ.

ಸಾಮಾನ್ಯವಾಗಿ ಇದಕ್ಕೆ ಬಳಸುವ ತರಕಾರಿಗಳು ಜೀಹಲಸಿನಕಾಯಿ (ಜೀಕುಜ್ಜೆ), ಮಂಗಳೂರು ಸೌತೆಕಾಯಿ, ಬೂದು ಕುಂಬಳಕಾಯಿ, ತೊಂಡೆಕಾಯಿ.

ಮಾಡೋದು ಬಹಳ ಸುಲಭ. ಯಾವುದೇ ಅಬ್ಬರವಿಲ್ಲದ ಮೇಲೋಗರವಿದು. ಅದಕ್ಕಾಗಿಯೇ ಹೇಳಿದ್ದು ಇದು ಸರಳ ಜೀವಿ.

ಮಾಡುವ ವಿಧಾನ :
ತರಕಾರಿಯನ್ನು ಸಣ್ಣದಾಗಿ ಹೋಳು ಮಾಡಿಕೊಳ್ಳಬೇಕು. ಸಣ್ಣದೆಂದರೆ ಸಿಕ್ಕಾಪಟ್ಟೆ ಸಣ್ಣದಲ್ಲ, ಕೊಂಚ ದೊಡ್ಡದಾಗಿರಲಿ. ನಂತರ ಅದನ್ನು ಬೇಯಿಸಲು ಒಲೆಯ ಮೇಲಿಡಬೇಕು. ಸಿಕ್ಕಾಪಟ್ಟೆ ನೀರು ಹಾಕಬೇಡಿ, ತರಕಾರಿ ಮುಳುಗಿದರೆ ಸಾಕು. ಮೆಲ್ಲನೆಯ ಉರಿಯಲ್ಲಿ ಉರಿಯುವಾಗ, ಎರಡು ಕುದಿ ಬಂದ ಮೇಲೆ ಒಂದೆರಡು ಹಸಿಮೆಣಸನ್ನು ಸೀಳಿ ಹಾಕಿ. ಅದಷ್ಟೆ ಖಾರ. ಆಮೇಲೆ ತೆಂಗಿನಕಾಯಿಯನ್ನು ತುರಿದಿಟ್ಟುಕೊಳ್ಳಿ.

ಸ್ವಲ್ಪ ತೆಂಗಿನಕಾಯಿ ಜಾಸ್ತಿ ಬೇಕು. ಇದಕ್ಕೆ ಬೇರೇನೂ ಹಾಕುವುದಿಲ್ಲ. ತುರಿದ ತೆಂಗಿನಕಾಯಿಗೆ ೧೫-೨೦ ಕಾಳು ಜೀರಿಗೆಯನ್ನು ಹಾಕಿ ಅರೆಯಿರಿ. ಬಹಳ ನುಣ್ಣಗಾಗುವುದು ಬೇಡ, ಅದರರ್ಥ ಬಹಳ ಗಜಿಗಜಿಯಾಗಿರಲೂ ಬಾರದು. ತರಕಾರಿ ಬೆಂದು ಮೇಲೆ, ಸ್ವಲ್ಪ ಉಪ್ಪು ಹಾಕಿ ಒಂದು ಕುದಿ ಬರಿಸಿ. ಆಗ ತರಕಾರಿ ಹೋಳುಗಳು ಉಪ್ಪಿನ ಸ್ವಾದವನ್ನು ಹೀರಿಕೊಳ್ಳುತ್ತವೆ. ನಂತರ ಅರೆದ ಕಾಯಿಯನ್ನು ಹಾಕಿ ಸೌಟಿನಲ್ಲಿ ಕಲಸಿ. ಬಳಿಕ, ಸ್ವಲ್ಪ ಮೊಸರು ಅಥವಾ ಮಜ್ಜಿಗೆ ಹಾಕಿ ತಿರುಗಿಸಿ. ಮಜ್ಜಿಗೆ ಅಥವಾ ಮೊಸರು ಹಾಕಿದ ಮೇಲೆ ಕುದಿಸಬಾರದು.

ಒಗ್ಗರಣೆ :
ಇದಕ್ಕೆ ಮೂರ್ನಾಲ್ಕು ಹನಿ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಒಂದೆರಡು ಕರಿಬೇವಿನ ಎಲೆ, ಒಂದೆರಡು ಜೀರಿಗೆ ಹಾಕಿ ಕಾಯಿಸಿ ಒಗ್ಗರಣೆ ಕೊಡಿ. ಅಲ್ಲಿಗೆ ಮಜ್ಜಿಗೆ ಹುಳಿ ಸಿದ್ಧ.

ಕೊನೆಗೊಂದಿಷ್ಟು ಟಿಪ್ಸ್ :

* ಇದಕ್ಕೆ ಕೆಲವರು ತೆಂಗಿನಕಾಯಿಯನ್ನು ರುಬ್ಬುವಾಗ ಸ್ವಲ್ಪವೇ ಸ್ವಲ್ಪ (ಹತ್ತು ಕಾಳಿನಷ್ಟು) ಕಡ್ಲೆಬೇಳೆಯನ್ನು ಕೆಂಪಗಾಗಿಸಿ ಸೇರಿಸಿ ಅರೆಯುತ್ತಾರೆ. ಆಗ ಮಜ್ಜಿಗೆ ಹುಳಿಗೆ ಒಂದು ಬಂಧ (ಸ್ವಲ್ಪ ದಪ್ಪಗೆ) ಬರುತ್ತದೆ.
* ಕಡ್ಲೆಬೇಳೆಯನ್ನು ಸೇರಿಸಿದರೆ ಹುಳಿಯೇನೋ ದಪ್ಪಗಾಗುತ್ತದೆ, ಆದರೆ ಅದರಲ್ಲಿ ತೇಜಸ್ಸು (ವೇಗ) ಇರುವುದಿಲ್ಲ.
* ಮೇಲೆ ಹೇಳಲಾದ ತರಕಾರಿಗಳಲ್ಲೇ ಬಿಸಿಗೆ ನೀರು ಬಿಡುವ ಗುಣವಿರುವುದರಿಂದ, ಮತ್ತಷ್ಟು ನೀರು ಹಾಕಿದರೆ ಪದಾರ್ಥ ನೀರು ನೀರಾಗುತ್ತದೆ. ತಿನ್ನಲು ರುಚಿಯಿರುವುದಿಲ್ಲ. ಹಾಗಾಗಿ ತರಕಾರಿ ಬೇಯಿಸಲು ಕಡಿಮೆ ನೀರು ಹಾಕಿ.
* ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕುವುದಿಲ್ಲ. ಕಾರಣ, ಹಸಿ ಜೀರಿಗೆಯ ಪರಿಮಳವೇ ಮಜ್ಜಿಗೆ ಹುಳಿಗೆ ಪ್ರಧಾನ.
* ಮಜ್ಜಿಗೆಯನ್ನು ಹಾಕಿದ ಮೇಲೆ ಕುದಿಸಿದರೆ, ಒಂದು ಬಗೆಯ ಒಗರು-ಕಹಿ ಬರುವ ಸಾಧ್ಯತೆ ಹೆಚ್ಚು.

Advertisements

4 thoughts on “ಕೊಡಕ್ಯನ ಅಥವಾ ಮಜ್ಜಿಗೆ ಹುಳಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s