ಬ್ಯಾಚುಲರ್ ಕಿಚನ್ ನಲ್ಲಿ ಎರಡು ಬಗೆ ಅನ್ನಗಳು !

ಬಹಳ ದಿನಗಳಾಗಿತ್ತು ಹೊಸ ತಿಂಡಿ ಅಥವಾ ಪದಾರ್ಥ ಬರೆಯದೇ. ಯಾವುದ್ಯಾವುದೋ ಕೆಲಸದ ಒತ್ತಡ. ಬಂದವರೆಲ್ಲಾ ಏನಾದ್ರೂ ಹಾಕಿ ಎಂದು ಆಗ್ರಹಿಸುತ್ತಲೇ ಇದ್ದಾರೆ. ಹೇಗಾದರೂ ಮಾಡಿ ಬ್ಲಾಗ್ ಅನ್ನು ಸಕ್ರಿಯಗೊಳಿಸಬೇಕು ಇಲ್ಲವೇ ಮುಚ್ಚಿಬಿಡಬೇಕು ಎಂದು ಆಲೋಚಿಸುತ್ತಿದ್ದೇನೆ. ಎರಡೂ ಆಗುತ್ತಿಲ್ಲ. ಇನ್ನು ಮುಂದಾದರೂ ಬ್ಲಾಗ್ ನ್ನು ಸಕ್ರಿಯಗೊಳಿಸಲು ಮೊದಲಿಗೆ ಪ್ರಯತ್ನಿಸುತ್ತೇನೆ, ಇಲ್ಲವಾದರೆ ಮುಚ್ಚಿ ಬಿಡುತ್ತೇನೆ.

ನಮ್ಮ ಬ್ಯಾಚುಲರ್ ಗಳದ್ದೇ ಕಷ್ಟ. ಅದಕ್ಕಾಗಿ ಬಹಳ ದಿನಗಳಾದ ಮೇಲೆ ಬ್ಯಾಚುಲರ್ ಗಳಿಗೆ ಸುಲಭವಾಗೋ ಐಟಂ ಬರೀತಾ ಇದ್ದೇನೆ. ಸಾಮಾನ್ಯವಾಗಿ ಯಾವಾಗಲೂ ಚಿತ್ತಾನ್ನ ಮಾಡಿಯೋ, ಹೋಟೆಲ್ ನಿಂದ ಸಾಂಬಾರ್ ತಂದೋ ಬಹಳ ಬೇಸರವಾಗಿರುತ್ತೆ. ಅದಕ್ಕಾಗಿ ಮೂರು ತರಹದ ಅನ್ನಗಳನ್ನು ಹೇಳುತ್ತೇನೆ. ಬಹಳ ಕಷ್ಟವಾಗೋಲ್ಲ,ಇರೋ ಸಾಮಾನುಗಳಲ್ಲೇ ಮಾಡಬಹುದು. ಒಂದುವೇಳೆ ಒಂದು ಸಾಮಾನು ಇರದೇ ಇದ್ದರೂ ತಲೆ ಹೋಗುವಂಥ ರುಚಿಯೇನೋ ಕಡಿಮೆ ಆಗೋದಿಲ್ಲ.

ತೆಂಗಿನಕಾಯಿ ಚಿತ್ರಾನ್ನ(Coconut Rice Bath)

ಹೇಗಿದ್ರೂ ಅನ್ನವನ್ನು ಕುಕ್ಕರ್ ನಲ್ಲಿಟ್ಟು ಮಾಡಿಬಿಡ್ತೀರಿ. ಆಮೇಲೆ ಅನ್ನ ತೆಗೆದು ಊಟದ ತಟ್ಟೆಯಲ್ಲಿ ಆರಲು ಬಿಡಿ. ಮೂರು ಹಸಿಮೆಣಸಿನಕಾಯಿಯನ್ನು ಸೀಳಿಟ್ಟುಕೊಳ್ಳಿ, ಕರಿಬೇವಿನ ಸೊಪ್ಪು ಜತೆಗಿರಲಿ. ಮೂರು ಮಂದಿ ಇದ್ದರೆ, ಒಂದು ಅರ್ಧ ತೆಂಗಿನಕಾಯಿ ತುರಿದು ಇಟ್ಟುಕೊಳ್ಳಿ.

ಒಗ್ಗರಣೆಗೆ ಬಾಣಲಿಯನ್ನು ಒಲೆ ಮೇಲಿಟ್ಟು, ಬೆಂಕಿ ಹಚ್ಚಿ ಸ್ವಲ್ಪ ಎಣ್ಣೆ ಹಾಕಿ. ಅದು ಕಾಯುತ್ತಿದ್ದಂತೆ ಸ್ವಲ್ಪ ಸಾಸಿವೆ ಹಾಕಿ, ಪಟ ಪಟ ಎಂದು ಸಿಡಿಯುತ್ತಿದ್ದಂತೆ ಸ್ವಲ್ಪವೇ ಸ್ವಲ್ಪ (ಹತ್ತಿಪ್ಪತ್ತು ಕಾಳು) ಉದ್ದಿನಬೇಳೆ, ಕಡ್ಲೆಬೇಳೆಯನ್ನು ಹಾಕಿ, ಕೆಂಪಗಾಗುವಂತೆ ಹುರಿಯಿರಿ. ನಂತರ ಹದಿನೈದು ಕಾಳು ಜೀರಿಗೆ ಹಾಕಿ. ಹಸಿಮೆಣಸಿನಕಾಯಿ, ಕರಿಬೇವಿನಸೊಪ್ಪು ಹಾಕಿ. ನಂತರ ತುರಿದ ತೆಂಗಿನಕಾಯಿ ಹಾಕಿ, ಉಪ್ಪು ಹಾಕಿ ಸೌಟಿನಿಂದ ತಿರುವಿರಿ. ಇಂಗಿನ ಪುಡಿ ಇದ್ದರೆ ಚೂರು ಹಾಕಿ, ನಂತರ ತಣ್ಣಗಾದ ಅನ್ನ ಹಾಕಿ ಕಲಸಿ. ಕೊನೆಗೆ ಲಿಂಬೆಹಣ್ನಿನ ರಸ ಚಿಮುಕಿಸಿ ಮತ್ತೊಮ್ಮೆ ಕಲಸಿ. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಮೇಲಕ್ಕೆ ಹಾಕಿ ಅಲಂಕಾರ ಮಾಡಬಹುದು. ಇದು ತಿನ್ನಲಿಕ್ಕೆ ರುಚಿ, ಮಾಡಲಿಕ್ಕೂ ಸುಲಭ. ಬೇಕೆನ್ನುವವರು ಎರಡು ಈರುಳ್ಳಿಯನ್ನೂ ಸಣ್ಣಗೆ ಕತ್ತರಿಸಿ ಹಸಿಮೆಣಸಿನಕಾಯಿ ಹಾಕಿದ ಮೇಲೆ ಹುರಿದು ಬಳಸಬಹುದು.

ಬೇಕಾಗೋ ಸಾಮಾನು
ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡ್ಲೇಬೇಳೆ
ಹಸಿಮೆಣಸಿನಕಾಯಿ ಮೂರು
ಕರಿಬೇವಿನಸೊಪ್ಪು ಮೂರು ಎಸಳು
ಸ್ವಲ್ಪ ಕೊತ್ತಂಬರಿ ಸೊಪ್ಪು
ಲಿಂಬೇಹಣ್ಣು 1
ಉಪ್ಪು ಸ್ವಲ್ಪ
ಬೇಕಾದರೆ ಇಂಗು

ದೊಡ್ಡಮೆಣಸು ಚಿತ್ರಾನ್ನ

ಮೂರು ಕ್ಯಾಪ್ಸಿಕಂ (ದೊಡ್ಡ ಮೆಣಸು) ನ್ನು ಉದ್ದವಾಗಿ ಕತ್ತರಿಸಿಟ್ಟುಕೊಳ್ಳಿ. ಉದಾಹರಣೆಗೆ ಚೈನೀ ಡಿಷಸ್ ನಲ್ಲಿ ಕತ್ತರಿಸುವ ಹಾಗೆ. ಸ್ವಲ್ಲ ತೆಳ್ಳಗೆ ಕತ್ತರಿಸಿ, ದಪ್ಪ ಇದ್ದರೆ ಬೇಗೆ ಫ್ರೈ ಆಗೋದಿಲ್ಲ. ಎರಡು ಈರುಳ್ಳಿಯನ್ನು ಅದೇ ತರಹ ಉದ್ದುದ್ದವಾಗಿ ಕತ್ತರಿಸಿಟ್ಟುಕೊಳ್ಳಿ. ಒಂದು ಟೊಮೆಟೋ ಅಥವಾ ಅರ್ಧ ಲಿಂಬೆಹಣ್ಣು ಸಿದ್ಧಪಡಿಸಿಟ್ಟುಕೊಳ್ಲಿ.

ನಿಮಗೆ ಬೇಕಾದಷ್ಟು ಅನ್ನವನ್ನು ಮಾಡಿಟ್ಟುಕೊಂಡು, ಬಟ್ಟಲಲ್ಲಿ ಹಾಕಿ ತಣ್ಣಗೆ ಮಾಡಿಟ್ಟುಕೊಳ್ಳಿ. ನಂತರ ಬಾಣಲೆ ಒಲೆ ಮೇಲಿಟ್ಟು, ಒಗ್ಗ್ರರಣೆಗೆ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಹಾಕಿ ಹುರಿಯಿರಿ. ನಂತರ ಈರುಳ್ಳಿ ಹಾಕಿ, ಸ್ವಲ್ಪ ಕೆಂಪಗಾಗುತ್ತಿದ್ದಂತೆ ಕ್ಯಾಪ್ಸಿಕಂನ್ನು ಹಾಕಿ ಹುರಿಯಿರಿ. ಅರ್ಧ ಚಮಚ ಆರಿಶಿನ ಪುಡಿ ಹಾಕಿ. ತಕ್ಷಣವೇ ಉಪ್ಪು ಹಾಕಿ, ಅರ್ಧ ಚಮಚದಷ್ಟು ಸಕ್ಕರೆ ಹಾಕಿ. ಸ್ವಲ್ಪ ಚೆನ್ನಾಗಿ ಹುರಿಯಿರಿ, ನಂತರ ಸ್ವಲ್ಪ ತೆಂಗಿನಕಾಯಿ ಹಾಕಿ, ಅನ್ನ ಹಾಕಿ ಕಲಸಿ, ಲಿಂಬೆಹಣ್ಣಿನ ರಸ ಹಾಕಿ ಮತ್ತೊಮ್ಮೆ ಕಲಸಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಸಿಂಗರಿಸಿ.

ಲಿಂಬೆಹಣ್ಣಿನ ಬದಲು ಟೊಮೆಟೋ ಹಣ್ಣನ್ನು ಹಾಕುವವರು, ಈರುಳ್ಳಿ, ಕ್ಯಾಪ್ಸಿಕಂ ಹಾಕಿದ ತಕ್ಷಣ ಕತ್ತರಿಸಿಟ್ಟ ಟೊಮೆಟೋ ಹಣ್ಣನ್ನು ಹಾಕಿ ಹುರಿಯಬೇಕು.

ಬೇಕಾಗೋ ಸಾಮಾನು
ಮೂರು ದೊಡ್ಡ ಮೆಣಸು
ಎರಡು ಈರುಳ್ಳಿ
ಒಂದು ಟೊಮೆಟೋ ಅಥವಾ ಅರ್ಧ ಲಿಂಬೆಹಣ್ಣು
ಕಾಲು ತುರಿದ ತೆಂಗಿನಕಾಯಿ
ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ

* ಇದಕ್ಕೆ ಕಡ್ಲೇಬೀಜ ಹಾಕಬೇಡಿ. ಕಾರಣ, ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೋ ಹುರಿಯುವಾಗ ನೀರಿನ ಅಂಶ ಬಿಡುತ್ತದೆ. ಆಗ ಹುರಿದ ಕಡ್ಲೆಬೀಜ ಅದರಲ್ಲಿ ನೆನೆದಂತಾಗಿ ಮೆದು ಆಗುತ್ತದೆ.ತಿನ್ನಲು ರುಚಿ ಇರದು.
* ಟೊಮೆಟೋ, ಲಿಂಬೆಹಣ್ಣು ಎರಡನ್ನೂ ಬಳಸಬೇಡಿ. ಯಾಕೆಂದರೆ ಕ್ಯಾಪ್ಸಿಕಂನದ್ದೇ ಹುಳಿಯ ಗುಣ. ಇದರೊಂದಿಗೆ ಇವೆರಡನ್ನೂ ಹಾಕಿದರೆ, ಜಾಸ್ತಿ ಹುಳಿಯಾದೀತು.
* ಒಗ್ಗರಣೆಗೆ ಜೀರಿಗೆ ಹಾಕಬೇಡಿ. ಜೀರಿಗೆಗೆ ಕಹಿಗುಣವಿದೆ, ಅದು ಕ್ಯಾಪ್ಸಿಕಂನ ಒಗರು ರುಚಿಯೊಂದಿಗೆ ಸೇರಿ ಸ್ವಲ್ಪ ಕಷ್ಟವೆನಿಸಬಹುದು ತಿನ್ನಲು.

Advertisements

7 thoughts on “ಬ್ಯಾಚುಲರ್ ಕಿಚನ್ ನಲ್ಲಿ ಎರಡು ಬಗೆ ಅನ್ನಗಳು !

    1. ನಮಸ್ಕಾರ,
      ಎಣ್ಣೆಗೆ ಯಾರೂ ಉಪ್ಪು ಹಾಕೋದಿಲ್ಲ, ಈಗ ಚಿತ್ರಾನ್ಯ ಮಾಡುವಾಗ ಉಳಿದ ಪದಾರ್ಥಗಳು (ನೀರುಳ್ಳಿ ಇತ್ಯಾದಿ), ತೆಂಗಿನಕಾಯಿ ಅನ್ನ ಮಾಡುವಾಗ ತೆಂಗಿನಕಾಯಿ ಹಾಕಿದ ಮೇಲೆ ಉಪ್ಪು ಹಾಕ್ತೀರಿ. ನೀವು ಹೇಳಿದಂತೆ ಹಾಗೇನೂ ಇಲ್ಲ, ಉದಾಹರಣೆಗೆ ಯಾವುದಾದರೂ ಕಾಳಿನ ಸಾಂಬಾರ್ ಮಾಡುವಾಗ, ಕಾಳು ಬೇಯಿಸುವಾಗಲೇ ಸ್ವಲ್ಪವೇ ಸ್ವಲ್ಪ ಉಪ್ಪು ಹಾಕಿದರೆ, ಸಾಂಬಾರ್ ಮಾಡುವಾಗಕಡಿಮೆ ಉಪ್ಪು ಹಾಕಿದರೆ ಸಾಕು. ಈ ವಾದದಲ್ಲಿ ನೋಡಿದರೆ ಉಪ್ಪು ಕಡಿಮೆ ಬಳಕೆಯಾಗುತ್ತದೆ ಎನ್ನೋದು ನನ್ನ ಭಾವನೆ.

  1. ಸರ್, ಒಗ್ಗರಣೆ ಎಣ್ಣೆಗೆ ಉಪ್ಪು ಹಾಕಿದರೆ ಚಿತ್ರಾನ್ನದಲ್ಲಿ ಉಪ್ಪು ಸರಿಯಾಗಿ (ಸಮನಾಗಿ) ಮಿಕ್ಸ್ ಆಗುತ್ತದೆ ಎಂಬುದು ಒಂದು ಲಾಜಿಕ್.

    ಉಪ್ಪು ಕಡಿಮೆ-ಜಾಸ್ತಿ ಅನ್ನುವ ಹಾಗಿಲ್ಲ. ರುಚಿಗೆ ತಕ್ಕಷ್ಟು ಬೀಳಲೇಬೇಕು. ಆದರೂ ಕೆಲ ಕಂಪನಿಯ ಉಪ್ಪು ಸ್ಟ್ರಾಂಗ್ ಆಗಿರುವುದು ಹೌದು, ಹಾಗಿದ್ದಾಗ ಉಪ್ಪು ಹಾಕುವ ಹದ ಹೆಚ್ಚು ಕಮ್ಮಿಯಾಗುತ್ತೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s