ಬರಿಯಕ್ಕಿ ದೋಸೆ

ನನಗೆ ಬಹಳ ಇಷ್ಟವಾದ ತಿಂಡಿಯದು. ಇಷ್ಟವಾದದ್ದು ಎರಡು ಕಾರಣಕ್ಕೆ. ಕೆಲಸ ಕಡಿಮೆ ಮತ್ತು ರುಚಿ ಜಾಸ್ತಿ. ಉಳಿದ ದೋಸೆಗಳಂತೆ ಗಂಟೆಗಟ್ಟಲೆ ಕೆಲಸ ಮಾಡಬೇಕಿಲ್ಲ. ಹೆಚ್ಚೆಂದರೆ ಅರ್ಧ ಗಂಟೆ ಸಾಕು. ಇದು ಕರಾವಳಿ ಭಾಗದ್ದು. ಬಹುತೇಕ ಕಡೆಗಳಲ್ಲಿ ಇದನ್ನು “ಬರಿಯಕ್ಕಿ ದೋಸೆ’ ಎನ್ನುತ್ತಾರೆ.
ಕಾರಣ, ಇದಕ್ಕೆ ಉದ್ದಾಗಲೀ, ಮೆಂತ್ಯೆಯಾಗಲೀ ಏನನ್ನೂ ಬಳಸುವುದಿಲ್ಲ. ಕೇವಲ ಅಕ್ಕಿ ಮಾತ್ರ. ಹಾಗಾಗಿ ಬರಿಯಕ್ಕಿ-ಓನ್ಲಿ ರೈಸ್- ದೋಸೆ ಎಂದು ಕರೆಯುತ್ತಾರೆ. ಆದರೆ ಕರಾವಳಿ ಘಟ್ಟ ದಾಟಿ ಈಚೆಗೆ ಬಂದ ಮೇಲೆ ಜನಪ್ರಿಯವಾದದ್ದು “ನೀರು ದೋಸೆ’ ಎಂದೇ.

ಇದಕ್ಕೂ ಕಾರಣವಿದೆ. ಮಾಮೂಲಿ ದೋಸೆ ಹಿಟ್ಟು ಸ್ವಲ್ಪ ದಪ್ಪವಾಗಿರುತ್ತೆ. ಅದಕ್ಕಿಂತ ನೀರಾಗಿರುವಂಥದ್ದು ಈ ದೋಸೆಯ ಹಿಟ್ಟು. ಜತೆಗೆ ದೋಸೆ ಹಿಟ್ಟನ್ನು ಕಾವಲಿಗೆ ಹಾಕಿ ಸುತ್ತುವಂಥ (ಬೇರೆ ದೋಸೆ ಸುತ್ತುವಂತೆ)ದ್ದೇನೂ ಇಲ್ಲ. ಸುಮ್ಮನೆ ಸುರಿದು ಬಿಡುವುದಷ್ಟೇ. ಹಾಗಾಗಿ ಜನ ಸುಲಭವಾಗಿ “ನೀರು ದೋಸೆ’ಎಂದು ಕರೆಯತೊಡಗಿದರು.

ಮಾಡುವ ಬಗೆ
ಹಿಂದಿನ ದಿನ ರಾತ್ರಿ ಸುಮಾರು ಒಂದೂವರೆ ಪಾವು (ಸುಮಾರು ಇಪ್ಪತ್ತೈದು ದೋಸೆಯಾಗಬಲ್ಲದು)ಅಕ್ಕಿ (ದಪ್ಪಕ್ಕಿ)ಯನ್ನು ನೀರಿನಲ್ಲಿ ನೆನೆಸಿಡಬೇಕು. ಬೆಳಗ್ಗೆ ಎದ್ದು ಎರಡು ಬಾರಿ ಚೆನ್ನಾಗಿ ತೊಳೆದು, ಅದಕ್ಕೆ ಸ್ವಲ್ಪ ತೆಂಗಿನಕಾಯಿ ಹಾಕಿ ಅರೆಯಬೇಕು. ನುಣ್ಣಗಾದ ಮೇಲೆ ತೆಗೆದು ಒಂದಿಷ್ಟು ನೀರು ಮತ್ತು ಉಪ್ಪು ಬೆರೆಸಿ ಹತ್ತು ನಿಮಿಷ ಸುಮ್ಮನೆ ಇಡಿ.

ನಂತರ ದೋಸೆ ಕಾವಲಿಯಿಟ್ಟು, ಸ್ವಲ್ಪ ಎಣ್ಣೆ ಹಚ್ಚಿ ಒಂದು ಸೌಟು ದೋಸೆ ಹಿಟ್ಟನ್ನು ಹುಯ್ಯಿರಿ. ಎರಡು ನಿಮಿಷದಲ್ಲಿ ದೋಸೆ ಸಿದ್ಧ. ತೆಳ್ಳಗೆ – ಬೆಳ್ಳಗೆ ದೋಸೆ ಚೆನ್ನಾಗಿರುತ್ತದೆ. ಅದಕ್ಕೆ ಚಟ್ನಿಪುಡಿ ಅಥವಾ ಮಾವಿನಕಾಯಿ ಚಟ್ನಿ ಬೆರೆಸಿಕೊಂಡು ತಿಂದರೆ ಚೆನ್ನ.

ಒಂದೆರಡು ಟಿಪ್ಸ್
* ಅಕ್ಕಿ ಹಿಟ್ಟು ಅರೆದು ತೆಗೆದ ಮೇಲೆ ಅದಕ್ಕೆ ತಣ್ಣೀರು ಹಾಕುವ ಬದಲು ಬಿಸಿನೀರು ಹಾಕಿ. ದೋಸೆ ಮೆದುವಾಗಿರುತ್ತದೆ.
* ಹಿಟ್ಟು ಅರೆಯುವಾಗ ನೀರಿನ ಬದಲು ತೆಂಗಿನಕಾಯಿಯ ನೀರನ್ನು ಹಾಕಿದರೆ ದೋಸೆ ಮೃದುವಾಗುತ್ತದೆ.
* ಹಾಗೆಯೇ ಹಿಟ್ಟಿಗೆ ನೀರಿನ ಬದಲು ಬೆಲ್ಲದ ನೀರು ಅಥವಾ ಕಬ್ಬಿನ ಹಾಲು ಬೆರೆಸಿದರೆ ಸಿಹಿ ನೀರು ದೋಸೆಯಾಗುತ್ತದೆ. ಈ ಸಂದರ್ಭದಲ್ಲಿ ಬಿಸಿ ನೀರು ಬಳಸಬೇಡಿ. ಆದರೆ ಒಲೆಯ ಕಾವು ಜಾಸ್ತಿ ಇಟ್ಟುಕೊಂಡರೆ ದೋಸೆ ಎದ್ದೇಳುವುದು ಕಷ್ಟ. ಬಹಳ ಮೃದುವಾಗುವುದರಿಂದ ಒಂದೇ ಹದದಲ್ಲಿ ಕಾವಿರಲಿ.
ಏನೇ ಅನುಮಾನಗಳಿದ್ದರೂ ಕೇಳಬಹುದು.

Advertisements

8 thoughts on “ಬರಿಯಕ್ಕಿ ದೋಸೆ

 1. ಅನುಮಾನಗಳಿಲ್ಲ.

  ನೀರುದೋಸೆ ನನ್ನ ಫೇವರಿಟ್!

  ಮೊದಲಿದ್ದೆಲ್ಲ ತಿಳಿದಿದ್ದೇ ಆದರೂ ಕೊನೆಯ ಹನಿಗಳು(ಟಿಪ್ಸ್) ಓದಿ ಖುಷಿಯಾಯಿತು. ಮುಂದಿನ ಸಲ ಇನ್ನೂ ಚೆನ್ನಾಗಿ ಮಾಡಬಹುದು..:)

  ಥ್ಯಾಂಕ್ಸ್!

 2. ದಪ್ಪಕ್ಕೀನೇ ಅಂತಲ್ಲ, ಯಾವುದೇ ಅಕ್ಕಿ ಬಳಸಬಹುದು. ಜತೆಗೆ ರಾತ್ರಿ ಇಡೀ ನೆನೆಯಬೇಕು. ಇಲ್ಲದಿದ್ದರೆ ದೋಸೆ ಒರಟಾಗುತ್ತದೆ.
  ಉಳಿದಂತೆ ಪ್ರತಿಕ್ರಿಯಿಸಿದ ಶ್ರೀ ಮತ್ತು ರಂಜಿತರಿಗೆ ಧನ್ಯವಾದ
  ನಾವಡ

 3. ತೆಂಗಿನಕಾಯಿ ಬದಲಿಗೆ ಕೆಕ್ಕರ್ಪೆ (ಮುಳ್ಳುಸೌತೆ) ತುರಿದು ಬಳಸಬಹುದು. ಇದು ಬೇರೆ ರೀತಿಯ ಪರಿಮಳ ನೀಡುತ್ತದೆ.

  1. ಬಳಸಬಹುದು. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಕೊಂಚ ಜಾಸ್ತಿಯಾದರೆ, ಬಹಳ ಮೃದುವಾಗುತ್ತದೆ. ಹೆಂಚಿನಿಂದ ತೆಗೆಯುವುದು ಕಷ್ಟವಾಗಬಹುದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s