ಅವಲಕ್ಕಿ ಬಿಸಿ ಬೇಳೆಭಾತ್

ಬಿಸಿಬೇಳೆಭಾತ್ ಎಲ್ಲರಿಗೂ ತಿಳಿದದ್ದೇ. ಆದರೆ ನಾನು ಈ ಬಾರಿ ಹೇಳುತ್ತಿರುವುದು ಅವಲಕ್ಕಿ ಬಿಸಿಬೇಳೆಭಾತ್. ಬಹಳಷ್ಟು ಬಾರಿ ತರಕಾರಿ, ಬೇಳೆ, ಅನ್ನ ಎಲ್ಲವೂ ಸೇರಿಕೊಂಡ ಅಕ್ಕಿಯ ಬಿಸಿಬೇಳೆಬಾತ್ ಭಾರ ಎನಿಸೋದು ಸಹಜ. ಹೆಚ್ಚು ತಿಂದರೆ ರಾತ್ರಿ ತನಕ ಇನ್ನೇನೂ ಬೇಡಪ್ಪಾ ಎನಿಸೋತ್ತೆ. ಇಂಥ ತೊಂದರೆಗಳಿಗೆ ಅವಲಕ್ಕಿ ಬಿಸಿಬೇಳೆ ಭಾತ್ ಪರಿಹಾರ.
ಮಾಡೋದಕ್ಕೆ ತಗಲುವ ಸಮಯವೂ ಸಹ ಅಕ್ಕಿ ಭಾತ್ ಗಿಂತ ಕಡಿಮೆ.
ಮೂರು ಮಧ್ಯಮ ಗಾತ್ರದ ಕ್ಯಾರೆಟ್, ಹದಿನೈದು ಬೀನ್ಸ್, ಎರಡು ಎಳೆ ನವಿಲುಕೋಸು, ಒಂದು ಆಲೂಗೆಡ್ಡೆ, ಎರಡು ಟೊಮೆಟೊವನ್ನು ಸ್ವಲ್ಪ ಉದ್ದುದ್ದವಾಗಿ ಹೋಳುಗಳನ್ನಾಗಿ ಮಾಡಿಕೊಳ್ಳಿ. ಐವತ್ತು ಗ್ರಾಂ ಅಷ್ಟು ಹಸಿ ಬಟಾಣಿಯನ್ನು ಹಾಗೂ ಮೂರು ಮುಷ್ಟಿ ತೊಗರಿ ಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿ.
ಕಾಲು ಕೆಜಿ ದಪ್ಪ ಅವಲಕ್ಕಿಯನ್ನು ಹತ್ತು ನಿಮಿಷ ನೆನೆಸಿ. ಅದು ಸಂಪೂರ್ಣ ನೆನೆಯುವುದಿಲ್ಲ, ಸ್ವಲ್ಪ ಗಟ್ಟಿ ಗಟ್ಟಿ ಇರುತ್ತದೆ. ಇರಲಿ ಗಾಬರಿಯಾಗುವುದು ಬೇಡ. ಜಾಸ್ತಿ ಹೊತ್ತು ನೆನೆದರೆ ಕರಗಿ ಹೋಗುತ್ತೆ.
ಇದಕ್ಕೆ ಹಾಕಬೇಕಾದ ಮಸಾಲೆ ಅಕ್ಕಿ ಬಿಸಿಬೇಳೆ ಭಾತ್ ಗೆ ಹಾಕುವಂಥದ್ದೇ. ಒಲೆ ಹಚ್ಚಿ ಇಟ್ಟ ಬಾಣಲಿಗೆ ಹಾಕಿದ ಎಣ್ಣೆ ಕಾದ ಮೇಲೆ ಹತ್ತು ಕಾಳು ಮೆಂತ್ಯೆ ಹಾಕಿ. ತಕ್ಷಣವೇ ಸ್ವಲ್ಪ ಉದ್ದಿನಬೇಳೆ ಹಾಕಿ, ಬೇಕಾದ್ರೆ ಕಡ್ಲೇಬೇಳೆಯನ್ನೂ ಹಾಕಬಹುದು (ಕಡ್ಲೇಬೇಳೆ ಹಾಕಿದರೆ ಭಾತ್ ದಪ್ಪ ಆಗುತ್ತದೆ). ಅದು ಸ್ವಲ್ಪ ಕೆಂಪಗೆ ಆಗುತ್ತಿದ್ದಂತೆ ಹದಿನೈದು ಕಾಳು ಜೀರಿಗೆ ಹಾಕಿ. ಜತೆಗೆ ಅಷ್ಟೇ ಕೊತ್ತಂಬರಿ ಕಾಳು ಹಾಕಿ. ಮೂರು ತುಂಡು ಚಕ್ಕೆ, ನಾಲ್ಕು ಲವಂಗ, ಏಲಕ್ಕಿ ಹಾಕಿ. ಆರು ಒಣ ಮೆಣಸು (ಬ್ಯಾಡಗಿ) ಮೂರು (ಗುಂಟೂರು) ಮೆಣಸು ಹಾಕಿ ಹುರಿಯಿರಿ. ಕರಿಬೇವಿನ ಸೊಪ್ಪು ಹಾಕಿ. ಅದನ್ನು ಸ್ವಲ್ಪ ತೆಂಗಿನ ಕಾಯಿ (ತೆಂಗಿನಕಾಯಿಯ ಅರ್ಧ ಭಾಗದಲ್ಲಿ ತುರಿದದ್ದರಲ್ಲಿ ಒಂದು ಭಾಗ)ಯನ್ನು ಹಾಕಿ ಮಸಾಲೆಯನ್ನು ರುಬ್ಬಿ. ಒಗ್ಗರಣೆಗೆ ಎರಡು ಕ್ಯಾಪ್ಸಿಕಂ ಮತ್ತು ಎರಡು ಈರುಳ್ಳಿಯನ್ನು ಉದ್ದವಾಗಿ ಹೆಚ್ಚಿಟ್ಟುಕೊಳ್ಳಿ.
ಬೆಂದ ತರಕಾರಿ (ನೀರೂ ಸಹಿತ) ಪಾತ್ರೆಗೆ ಹಾಕಿ ಒಲೆ ಮೇಲಿಡಿ. ಅದಕ್ಕೆ ಎರಡು ಮುಷ್ಟಿ ಶೇಂಗಾ ಬೀಜ ಹಾಕಿ. ಒಂದು ಕುದಿ ಬರಲಿ. ಆಗ ಅವಲಕ್ಕಿಯನ್ನೂ ಹಾಕಿ. ಜತೆಗೆ ಉಪ್ಪು, ರುಬ್ಬಿದ ಮಸಾಲೆ ಹಾಕಿ. ಚೆನ್ನಾಗಿ ಕುದಿ ಬರುವವರೆಗೂ ಕಾಯಿರಿ.
ಇದೇ ಸಂದರ್ಭದಲ್ಲಿ ಬಾಣಲಿಯಿಟ್ಟು ಎಣ್ಣೆ ಹಾಕಿ. ಹೆಚ್ಚಿಟ್ಟ ಈರುಳ್ಳಿ ಮತ್ತು ಕ್ಯಾಪ್ಸಿಕಂ ನ್ನು ಅದರಲ್ಲಿ ಹುರಿಯಿರಿ. ಸ್ವಲ್ಪ ಕೆಂಪಗಾದ ಮೇಲೆ ಕುದಿ ಬಂದ ಭಾತ್ ಗೆ ಹಾಕಿ ತಿರುವಿ. ಅಲ್ಲಿಗೆ ಅವಲಕ್ಕಿ ಬೇಳೆಭಾತ್ ಸಿದ್ಧ. ಬೆಳಗ್ಗೆ ತಿಂಡಿಗೆ ಓಕೆ. ಹೆಚ್ಚು ಹೊತ್ತು ಕಳೆದಷ್ಟೂ ಅದು ಹಿಗ್ಗುತ್ತದೆ. ಅಷ್ಟೇ ಅಲ್ಲ, ಅವಲಕ್ಕಿ ಮೆದುವಾಗುತ್ತದೆ. ಈರುಳ್ಳಿಯೊಂದಿಗೆ ಒಂದು ಸಣ್ಣ ಗೆಡ್ಡೆ ಬೆಳ್ಳುಳ್ಳಿಯನ್ನೂ ಹಾಕುವವರು ಹಾಕಬಹುದು.

Advertisements

4 thoughts on “ಅವಲಕ್ಕಿ ಬಿಸಿ ಬೇಳೆಭಾತ್

 1. ಇನ್ನೇನು ಮುಚ್ಚಿಡೋದು? ಹೇಳ್ಕೊಂಡೇ ಬಿಡ್ತೀನಿ..
  ಈಗ ನಾಲ್ಕೈದು ತಿಂಗಳ ಕೆಳಗೆ ಅದೇನೋ ಹುಕ್ಕಿ ಬಂದು ಅವಲಕ್ಕಿ ಬಿಸಿಬೇಳೆಬಾತ್ ಮಾಡಹೊರಟೆ. ಅಮ್ಮ ಯಾವಾಗ್ಲೂ ಮಾಡ್ತಿದ್ದ ನೆನಪಿತ್ತು. ಥೇಟು ಅನ್ನದ ಬಿಸಿಬೇಳೆ ಬಾತ್ ಹಾಗೇ ಅಂದ್ಕೊಂಡೂ…
  ಅಂದ್ಕೊಂಡೂ…
  ಅವಲಕ್ಕೀನೂ ಕುಕ್ಕರಿಗೆ ಹಾಕ್ಬಿಟ್ಟೆ!

  ಹ್ಮ್… ಅಣ್ಣ್ ಸಂಜೆಗೆ ತಿಂಡಿ ಮಾಡಿಡು ಬರೋದ್ರೊಳಗೆ ಅಂದಿದ್ದ… ಇನ್ನಿದ್ನ ನೋಡಿದ್ರೆ ಅಣಕಿಸ್ತಾನೆ ಅಂತ ಮಾಡಿ ಹಾಳಾಗಿದ್ನೆಲ್ಲ ಅತ್ಕೊಂಡು (ನಿಜ್ಜ್ ಡಿಸ್ ಅಪಾಯಿಂಟ್ ಆಗಿತ್ತು 😦 ) ಕವರಿಗೆ ತುರುಕಿ ಹೊರಗಿಟ್ಟೆ. ಆಮೇಲೆ ಟಾಪ್ ರಾಮನ್ಸ್ ನೂದಲ್ಸ್ ಮಾಡಿ ಅಣ್ಣಂಗೆ ತಿನ್ನಿಸಿದ್ದೆ!

  ಥ್ಯಾಂಕ್ಸ್ ನಿಮ್ಗೆ. ತುಂಬಾ ತುಂಬಾ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s