ಕಲ್ಲಂಗಡಿ ಸಿಪ್ಪೆ ಪಲ್ಯ !

ಕಲ್ಲಂಗಡಿ ಹಣ್ಣು ಗೊತ್ತಲ್ಲ. ಅದರ ಸಿಪ್ಪೆಯ ಪಲ್ಯ ಗೊತ್ತೇ?
ಕೆಲವರಿಗೆ ಗೊತ್ತಿರಬಹುದು. ಅದರ ರುಚಿ ಅದ್ಭುತ. ನನ್ನ ಮೂರನೇ ರೆಸಿಪಿ ಅದೇ. “ಕಲ್ಲಂಗಡಿ ಸಿಪ್ಪೆ ಪಲ್ಯ’.
ಏನು ? ನಾವಡರು ಸಿಪ್ಪೆ ಇಡ್ಕೊಂಡಿದ್ದಾರಲ್ಲಾ ಅನ್ನಬೇಡಿ. ಇದೂ ಒಂದು ರೀತಿಯಲ್ಲಿ ಕಸವನ್ನು ರಸ ಮಾಡೋದು ಅಂತಲ್ಲ ; ಸಿಪ್ಪೆಯಿಂದ ಮೇಲೋಗರ ಮಾಡೋದು.
ಕಲ್ಲಂಗಡಿ ಸಿಪ್ಪೆ ಪಲ್ಯ ಮಾಡುವುದು ಬಹಳ ಸುಲಭ. ಹಣ್ಣು ತಿಂದ ಮೇಲೆ ಸಿಪ್ಪೇನಾ ತೆಗೆದಿಡಿ. ಫ್ರಿಜ್‌ನಲ್ಲಿಟ್ಟರೆ ನಾಲ್ಕು ದಿನದ ನಂತರವೂ ಆ ಸಿಪ್ಪೇನಾ ಬಳಸಬಹುದು.
ಸಿಪ್ಪೆಯ ಮೇಲಿನ ಸಿಪ್ಪೆಯನ್ನು (ಹಸಿರು ಇರುವಂಥದ್ದು) ತೆಳ್ಳನೆಯದಾಗಿ ತೆಗೆಯಿರಿ, ಕೆರೆದು ತೆಗೆಯಬೇಡಿ. ಚಾಕುವಿನಿಂದ ತೆಗೆತಬೇಕು ಪಪಾಯಿ ಹಣ್ಣಿನ ಸಿಪ್ಪೆ ತೆಗೆದ ಹಾಗೆ. ನಂತರ ಸಣ್ಣ ಸಣ್ಣದಾಗಿ ಹೋಳುಗಳನ್ನು ಮಾಡಿ. ಸಣ್ಣ ಸಣ್ಣ ಚೂರಾದಷ್ಟೂ ರುಚಿ.
ಒಲೆ ಹಚ್ಚಿ ಇಟ್ಟ ಬಾಣಲಿಗೆ ಎಣ್ಣೆ ಸ್ವಲ್ಪ ಹಾಕಿ. ನಂತರ ಒಗ್ಗರಣೆ ಕೊಟ್ಟು ತುಂಡು ಮಾಡಿದ ಕಲ್ಲಂಗಡಿ ಸಿಪ್ಪೆಯ ಚೂರುಗಳನ್ನು ಹಾಕಿ. ಜತೆಗೆ ನೆನೆಸಿದ್ದ ಕಡ್ಲೇಕಾಳಿದ್ದರೆ ಒಂದು ಮುಷ್ಠಿ ಹಾಕಿ (ಇದು ಒಳ್ಳೆ ರುಚಿ ಕೊಡುತ್ತೆ, ಇಲ್ಲದಿದ್ದರೆ ಹೆಸರುಕಾಳು ಚೆನ್ನಾಗಿರುತ್ತೆ). ಉಪ್ಪು ಹಾಕಿ, ಸ್ವಲ್ಪ ಹುಣಸೇಹಣ್ಣು ರಸ ಹಾಕಿ ಬೇಯಲು ಬಿಡಿ. ಸಣ್ಣ ಉರಿಯಲ್ಲಿ
ಹದಿನೈದು ನಿಮಿಷದ ನಂತರ ಅದು ನೀರು ಆರಿ ಬೆಂದಿರುತ್ತೆ.
ಇದಕ್ಕೆ ಸಾಸಿವೆ, ತೆಂಗಿನಕಾಯಿ, ಒಣ ಮೆಣಸು ಹಾಕಿ ಅರೆದ “ಕಾಯಿ ಮಸಾಲೆ’ ಯನ್ನಾದರೂ ಹಾಕಬಹುದು. ಇಲ್ಲದಿದ್ದರೆ ಬರೀ ಅಚ್ಚ ಮೆಣಸಿನ ಪುಡಿ ಹಾಗೂ ತೆಂಗಿನ ಕಾಯಿಯ ತುರಿ (ಎರೆದ ತೆಂಗಿನ ಕಾಯಿ) ಹಾಕಿ ಕಲೆಸಿದರೆ ಪಲ್ಯೆ ಸಿದ್ಧ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಬಹುದು.

Advertisements

7 thoughts on “ಕಲ್ಲಂಗಡಿ ಸಿಪ್ಪೆ ಪಲ್ಯ !

 1. ಹಾ! ನೀವೊಳ್ಳೆ ಕಸದಿಂದ ರಸದ ಮೆಥಡ್ ಹೇಳ್ಕೊಡ್ತಿದೀರಲ್ಲ!
  ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು ಕೇಳಿದ್ದೆ – ತಿಂದಿದ್ದೆ. ಇದಿನ್ನೊಂದು ಕೈ ಮೇಲೇ ಇದೆ,.ನೋಡ್ಬೇಕು ಒಂದುಸಲ ಪ್ರಯತ್ನಿಸಿ!

 2. ಮರುಕೋರಿಕೆ (Pingback): ಸಿಪ್ಪೆಗೂ ಒಂದು ಕಾಲ « ಅವಧಿ
 3. ಅರ್ಚನಾರೇ,
  ರುಚಿ ಚೆನ್ನಾಗಿರುತ್ತೆ. ನೀವೇ ನಮಗೆ ಫೋಟೋ ಕಳಿಸ್ಬೇಕು.ಸಹಕರಿಸಿ. ಅಭಿಪ್ರಾಯ ನೀಡುತ್ತಿರುವುದಕ್ಕೆ ಧನ್ಯವಾದ.
  ನೀಲಾಂಜನರಿಗೂ ನಮಸ್ಕಾರ.
  ಟ್ರೈ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದ.
  ಚೇತನಾರೇ.
  ಬರೀ ಬಾಯಲ್ಲಿ ನೀರೂರಿಸಿ ಬಿಟ್ರೆ ಹೇಗೆ ?
  ಅವಧಿಗೆ ಥ್ಯಾಂಕ್ಸ್.
  ಬಂದು ಅಭಿಪ್ರಾಯಿಸಿದ್ದಕ್ಕೆ ಮತ್ತು ತನ್ನ ಬ್ಲಾಗ್ ಮಂಡಲದಲ್ಲಿ ದಾಖಲಿಸಿದ್ದಕ್ಕೆ
  ನಾವಡ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s