ಹೀರೇಕಾಯಿ ಸಿಪ್ಪೆ ಚಟ್ನಿ

ಗೊಜ್ಜು ೧-

ಹೀರೇಕಾಯಿ ಒಳ್ಳೆ ತರಕಾರಿ. ಅದರಲ್ಲಿ ದೋಸೆ, ಹುಳಿ ಹಾಗೂ ಸಿಹಿ ಮಾಡ್ತಾರೆ. ಆದರೆ ಅದರ ಸಿಪ್ಪೆಯ ಗೊಜ್ಜು ಬಹಳ ಚೆನ್ನಾಗಿರುತ್ತೆ. ಅದರಲ್ಲೂ ಬರೀ ಅನ್ನ ಕಲಸಿ ತಿನ್ನಲು ಸೂಪರ್. ಹಾಗೆಯೇ ಇಡ್ಲಿ, ದೋಸೆಗೂ ಓಕೆ. ಕೆಲಸ ಕಡಿಮೆ ಹಾಗೂ ಎಕಾನಮಿ !
ಹೇಗಿದ್ರೂ ಸಾಂಬಾರ್‌ಗೆ ಎಂದು ಹೀರೇಕಾಯಿ ತಂದಿರ್‍ತೀರಿ. ಅದರ ಮುಳ್ಳಿನಂತಿರುವ ಭಾಗವನ್ನು ಎರೆದು ಸಮತಟ್ಟಾಗಿಸಿ. ನಂತರ ಅದರ ಸಿಪ್ಪೆಯನ್ನು ತೆಗೆಯಿರಿ. ಇದನ್ನು ಕವರ್‌ನಲ್ಲಿಟ್ಟು ಫ್ರಿಜ್‌ನಲ್ಲಿಟ್ಟರೆ ಒಂದು ವಾರದವರೆಗೂ ಚೆನ್ನಾಗಿರುತ್ತೆ.
ಮನೆಯಲ್ಲಿ ಮೂರು ಮಂದಿಯಿದ್ದರೆ, ಒಂದು ಹತ್ತು ಸಿಪ್ಪೆ ಸಾಕು. ಅದನ್ನು ಚಿಕ್ಕ ಬಾಣಲಿಯಲ್ಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಹುರಿಯಬೇಕು. ಹತ್ತು ನಿಮಿಷ ಹುರಿದ ಮೇಲೆ ಪಚ್ಚೆ ಹಸಿರಿನ ಬಣ್ಣ ನೀರಿನಲ್ಲಿ ಅದ್ದಿ ತೆಗೆದಂತಾಗುತ್ತದೆ. ನಂತರ ಅದನ್ನು ತಟ್ಟೆಗೆ ತೆಗೆದಿಟ್ಟು, ಅದೇ ಬಾಣಲಿಗೆ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಸ್ವಲ್ಪ ಉದ್ದಿನಬೇಳೆ ಹಾಕಿ. ನಾಲ್ಕೈದು ಒಣಮೆಣಸು ಹಾಕಿ. ಹುರಿದು ಆ ಸಿಪ್ಪೆಯೊಂದಿಗೆ ಸೇರಿಸಿ ಮಿಕ್ಸಿಗೆ ಹಾಕಿ. ಜತೆಗೆ ಸ್ವಲ್ಪ ನೆನೆಸಿಟ್ಟ ಹುಣಸೆಹಣ್ಣು, ತೆಂಗಿನಕಾಯಿ (ಇಬ್ಬರಿಗೆ ತೆಂಗಿನಕಾಯಿಯ ಕಾಲು ಭಾಗದಷ್ಟು) ಹಾಗೂ ಉಪ್ಪು ಹಾಕಿ ರುಬ್ಬಿ. ಗೊಜ್ಜು ಸಿದ್ಧ.
ನಂತರ ಕರಿಬೇವಿನಸೊಪ್ಪಿನೊಂದಿಗೆ ಇಂಗಿನ ಒಗ್ಗರಣೆ ಹಾಕಿ.
ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಹೀರೇಕಾಯಿ ಸಿಪ್ಪೆ ಕಹಿ ಇದೆಯಾ ಎಂದು ಮೊದಲು ಚೂರು ತಿಂದು ನೋಡಿಕೊಳ್ಳಿ. ಇಲ್ಲವಾದರೆ ಕಾರ್ಕೋಟಕ ವಿಷ ಸೇವಿಸಿದ ಅನುಭವವಾದೀತು.
ಉದ್ದಿನಬೇಳೆ ಸರಿಯಾಗಿ ಹುರಿಯದಿದ್ದರೆ, ಸ್ವಲ್ಪ ಹಸಿ ವಾಸನೆ ಬರುತ್ತದೆ. ಹೀರೇಕಾಯಿಯನ್ನೂ ಸರಿಯಾಗಿ ಹುರಿಯದಿದ್ದರೆ ಹಸಿ ವಾಸನೆ ಸಾಮಾನ್ಯ. ರುಚಿಸದು.

Advertisements

7 thoughts on “ಹೀರೇಕಾಯಿ ಸಿಪ್ಪೆ ಚಟ್ನಿ

 1. ನಾವಡ ಅವರೆ…
  ಹೀರೆಕಾಯಿ ಸಿಪ್ಪೆ ಗೊಜ್ಜು ಚೆನ್ನಾಗಿತ್ತು. ಇದೇ ರೀತಿಯಲ್ಲಿ ಸವತೆಕಾಯಿಸಿಪ್ಪೆಯಲ್ಲಿಯೂ ಗೊಜ್ಜು ಮಾಡಬಹುದು.
  ಥ್ಯಾಂಕ್ಸ್, ಹೀರೆಕಾಯಿ ಗೊಜ್ಜಿನ ರೆಸಿಪಿಯನ್ನ ಕೊಟ್ಟಿದ್ದಕ್ಕೆ ಹಾಗೂ ನೆನಪಿಸಿದ್ದಕ್ಕೆ.

 2. ಓಹೋ…
  ನಂಗೆ ಈ ರೆಸಿಪಿ ಮೊದ್ಲೇ ಗೊತ್ತಿತ್ತೂ….
  ನಾವಡರೇ, ಮೊದಲಿನ ವಿನ್ಯಾಸವೇ ಚೆನಾಗಿತ್ತು. ನಂಗೆ ಮೊದ್ಲೇ ಕಣ್ ಪ್ರಾಬ್ಲಮ್. ಇದು ತೀರಾ ಚಿಕ್ಕ ಚಿಕ್ಕ ಅಕ್ಷರ. ತುಂಬಾ ತೊಂದ್ರೆ ಕೊಡತ್ತೆ. ಬದಲಾಯಿಸಿದ್ರೆ ಮಹದುಪಕಾರವಾಗ್ತಿತ್ತು…

 3. ನಾವಡರಿಗೆ ಧನ್ಯವಾದ…

  ನಾವ್ ಬೇರೆ ಯಾವ್ದೋ ಊರಲ್ಲಿದ್ದಾಗ್ಯೂ ಅಮ್ಮನ ಅಡುಗೆಗಳನ್ನ ನೆನಪಿಸುತ್ತಿರುವಿರಿ…

  ರೆಸಿಪೀಗಳನ್ನು ವಿವರಿಸುವಾಗ, ಹಾಗೆ ಮಾಡಲು ಕಾರಣವನ್ನೂ ಹೇಳಿದರೆ. (ಅನ್ನ ಸಾಂಬಾರ್ ಪಲ್ಯ ಉಪ್ಪಿಟ್ಟು ಬಿಟ್ರೆ ಮತ್ತೇನೂ ಮಾಡಲು ಬಾರದ) ನಮ್ಮಂತಹ ನಳ ಮನುಷ್ಯರಿಗೆ ಉಪಯೋಗವಾದೀತು.
  ನನ್ನ ಬಿನ್ನಹವಷ್ಟೇ ಇದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s